top of page

ವಿಶ್ವಧರ್ಮ ಸಮ್ಮೇಳನಕ್ಕೆ 1933 ಪಂ.ತಾರಾನಾಥರಿಗೆ ಆಹ್ವಾನ





World Fellowship of Faith ನಲ್ಲಿ ಭಾಗಿಯಾಗುವಂತೆ ಪಂ.ತಾರಾನಾಥರಿಗೆ

ಅಮೇರಿಕಾದಿಂದ ಪತ್ರ ಬರುತ್ತದೆ. ಆ ಪತ್ರದಲ್ಲಿ -

“ಪಂಡಿತ. ತಾರಾನಾಥರೆ, ‘ತಮ್ಮ ಉತ್ತಮ ವಾಗ್ಝರಿಯ ವದಂತಿಯನ್ನು ಕೇಳಿ

ಇಲ್ಲಿಯ ವರ್ಲ್ಡ ಫೆಲೋಷಿಪ್ ಆಫ್ ಫೇತ್ (Woಡಿಟಜ ಜಿeಟಟoತಿshiಠಿ oಜಿ ಜಿಚಿiಣhs)ನಲ್ಲಿ

ತಾವು ಭಾಗಿಗಳಾಗಬೇಕೆಂದು ಇಚ್ಛೆ. 1893ರಲ್ಲಿ ಸ್ವಾಮಿ ವಿವೇಕಾನಂದರು ಎಷ್ಟು

ದೊಡ್ಡ ಪ್ರಭಾವ ಬೀರಿದರೋ, ತಾವು 1933 ಅದನ್ನೇ ಮಾಡಬಲ್ಲಿರಿ ಎಂಬ

ನಂಬಿಕೆ ಇದೆ” ಎಂದು ಬರೆದು ಆಹ್ವಾನ ನೀಡಿದರು. ಕರ್ನಾಟಕದ ಓರ್ವ ವ್ಯಕ್ತಿಗೆ ಸಂದ

ಈ ಅದ್ಭುತ ಗೌರವವು ಅಭಿಮಾನದ ಸಂಗತಿ. ಅಮೇರಿಕಾದ ಚಿಕಾಗೋ ನಗರದಲ್ಲಿ

೧೮೯೩ ರಲ್ಲಿ ಪ್ರಥಮ ವಿಶ್ವಧರ್ಮ ಸಮ್ಮೇಳನ

Pಚಿಡಿಟiಚಿmeಟಿಣ oಜಿ ಖeಟigioಟಿ ಜರುಗಿತ್ತು.

ಸ್ವಾಮಿ ವಿವೇಕಾನಂದರು ಭಾರತವನ್ನು

ಪ್ರತಿನಿಧಿಸಿ “ಒಥಿ bಡಿoಣheಡಿs ಚಿಟಿಜ sisಣeಡಿs oಜಿ

ಂmeಡಿiಛಿಚಿ” ಎಂದು ಭಾಷಣ ಮಾಡಿದ್ದು

ಮತ್ತು ಅವರ ವಿಚಾರಗಳು ಎಲ್ಲ ಧರ್ಮ

ಗುರುಗಳ ಮನಸೂರೆಗೊಂಡದ್ದು, ಸ್ವಾಮಿ

ವಿವೇಕಾನಂದರು ದೇಶ ವಿದೇಶದ ತುಂಬಾ

ಪ್ರಸಿದ್ಧರಾದುದ್ದು ನಮಗೆಲ್ಲಾ ತಿಳಿದೇ ಇದೆ.

ಜಗತ್ತಿನ ಬೇರೆ ಬೇರೆ ಧರ್ಮ ಗುರುಗಳು

ಸೇರಿದಂತೆ ಸಮ್ಮೇಳನದಲ್ಲಿ ನಲವತ್ತೊಂದು

ಧರ್ಮ ಗುರುಗಳು ಮತ್ತು ೫೦೦೦

ಜನರು ಈ ವಿಶ್ವ ಧರ್ಮ ಸಮ್ಮೇಳನದಲ್ಲಿ

ಭಾಗವಹಿಸಿದ್ದರೆಂದರೆ ಎಂಥ ಬೃಹತ್

ಸಮ್ಮೇಳನ ಅದಾಗಿರಬಹುದು.

1933 ರಲ್ಲಿ ಅದೇ ರೀತಿ

ನಮ್ಮ ಪಂಡಿತ ತಾರಾನಾಥರಿಗೂ ೨ನೆಯ ವಿಶ್ವಧರ್ಮ ಸಮ್ಮೇಳನಕ್ಕೆ ಭಾರತದ

ಪ್ರತಿನಿಧಿಯಾಗಿ ಬರುವಂತೆ ಆಹ್ವಾನ ಬಂದಿತ್ತು. ಈ ಆಹ್ವಾನದ ವಿಷಯ ತಿಳಿದ ಜನ

ಬಹಳ ಹರ್ಷಿತರಾದರು. ಅಲ್ಲಿನ ಜನರೆಲ್ಲಾ ಸೇರಿ ಅಮೇರಿಕಾಕ್ಕೆ ಕಳಿಸಲು ಹೇಗೋ

ಹಣವನ್ನು ಸಂಗ್ರಹಿಸಿ, ಹಣವನ್ನು ತಾರಾನಾಥರ ಮುಂದಿಟ್ಟು ಬೇಡಿಕೊಂಡರು. ಆದರೆ

ಪಂಡಿತ ತಾರಾನಾಥರು ಇದಕ್ಕೆ ಒಪ್ಪಲಿಲ್ಲ. “ನನ್ನನ್ನೇ ನಂಬಿ, ನನ್ನ ಮೇಲೆಯೇ

ಅವಲಂಬಿತರಾದ ಈ ದೀನ ದಲಿತರು, ಕಾಲರಾದಂಥ ಭಯಂಕರ ರೋಗದಿಂದ

ಬಳಲುತ್ತಿದ್ದಾರೆ. ಇವರ ಸೇವೆಯೇ ನನ್ನ ಧರ್ಮ. ``ಆಚರಣ ಹೀನವಾದ ಬುದ್ಧಿ

ಪ್ರದರ್ಶನದಲ್ಲಿ ನಾನು ಹೊತ್ತು ಕಳೆಯಲಾರೆ” ಎಂದು ಬಿಟ್ಟರು. “ಅಮೇರಿಕೆಯು

ನಿಜವಾಗಿ ಧರ್ಮ ಪ್ರವರ್ತಕವಾದಾಗ, ಧರ್ಮ ಮಾತೆ ಎನಿಸಿದ ಜಗತಿಯು ಧರ್ಮ

ವೀರನೊಬ್ಬನ ವÆಲಕ, ಭಾರತದ ಸಂದೇಶವನ್ನು ಅಲ್ಲಿಗೆ ಕಳಿಸುವಳು” ಎಂದು

Woಡಿಟಜ ಜಿeಟಟoತಿshiಠಿ oಜಿ ಜಿಚಿiಣhs ನ ಆಯೋಜಕರಿಗೆ ಬರೆದುಬಿಟ್ಟರು.

bottom of page