top of page

ದಖ್ಖನ್ ಹೈದರಾಬಾದಿನಲ್ಲಿ ತಾರಾನಾಥರು 1905

ರಾಜೀವಿ ಬಾಯಿಯವರು ತೀರಿದ ಬಳಿಕ ತಂದೆ ತಾಯಿಯನ್ನು ಕಳೆದುಕೊಂಡ ಈ ಐದು ಜನ ಮಕ್ಕಳಿಗೆ

ರಾಜೀವಿಬಾಯಿಯವರ ತಂಗಿ ನೇತ್ರಾವತಿಬಾಯಿ ಆಶ್ರಯದಾತರಾದರು.




ಹೈದರಾಬಾದ್ ಕಾಲೇಜು ಶ್ರೀ ಅಘೋರನಾಥ್ ಚಟ್ಟೋಪಾಧ್ಯಾಯರಿಂದ 1878 ರಲ್ಲಿ ಆರಂಭಗೊಂಡಿತು.ಇವರು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ ತಂದೆ.ನಂತರ ಇದೆ ಕಾಲೇಜು ಹೆಸರು ಬದಲಾವಣೆ ಗೊಂಡು 1887 ರಲ್ಲಿ ನಿಜಾಂ ಕಾಲೇಜು ಆಯಿತು.


ಸರೋಜಿನಿ ನಾಯ್ಡು ತಾರಾನಾಥರನ್ನು ಕುರಿತು

ಒಂದು ಬಾರಿ ಸ್ಥಳಿಯ ವೈ.ಎಮ್.ಸಿ.ಎ ಆಶ್ರಯದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಅಂದಿನ ಸಭೆಗೆ ‘ಭಾರತದ ಕೋಗಿಲೆ ಎಂದೇ ಹೆಸರಾಗಿದ್ದ ಶ್ರೀಮತಿ ಸರೋಜಿನಿ

ನಾಯ್ಡು ಅವರು ಅಧ್ಯಕ್ಷತೆ ವಹಿಸಿದ್ದರು. ತರುಣ ಪಂಡಿತ ತಾರಾನಾಥರ ಭಾಷಣದ

ವೈಖರಿಯನ್ನು ಮೆಚ್ಚಿ “ಈ ತರುಣ ರಾಜಕೀಯ ರಂಗದಲ್ಲಿ ಕಾಲಿಟ್ಟಿದ್ದೇ ಆದರೆ ಅವನಿಗೆ

ಗೋಖಲೆ ಮತ್ತು ತಿಲಕರಂತೆ ಉತ್ತಮ ಭವಿಷ್ಯವಿದೆ” ಎಂದು ಹೇಳಿದರು.


ರಾಜ ವೈದ್ಯ ಹಕೀಮ ಹರಿಗೋವಿಂದಜಿ ಬಳಿ ತಾರಾನಾಥರು ಹೈದರಾಬಾದಿನ ಸ್ಥಳೀಯ ಮೆಡಿಕಲ್ ಕಾಲೇಜಿಗೆ ಸೇರಿ ಪ್ರತಿಭಾವಂತ ವಿದ್ಯಾರ್ಥಿ

ಎಂದು ಹೆಸರುಗಳಿಸಿದ್ದರು. ಇದೇ ಸಮಯದಲ್ಲಿ ರಾಜ ವೈದ್ಯರಾಗಿದ್ದ ಹಕೀಮ

ಹರಿಗೋವಿಂದಜಿ ಅವರಲ್ಲಿ ಆಯುರ್ವೇದ ವಿದ್ಯೆ ಕಲಿತರು. ತಾರಾನಾಥರು ಸಂಗೀತ

ಮತ್ತು ತಬಲಾವನ್ನೂ ಕರಗತಮಾಡಿಕೊಂಡರು. ಇವರಿಗೆ ಯೋಗ ವಿದ್ಯೆಯಲ್ಲಿ ಆಸಕ್ತಿ

ಇರುವುದರಿಂದ ಹೈದರಾಬಾದಿನ ರಾಮಕೃಷ್ಣ ಮಠಕ್ಕೆ ಸೇರಿ ಹಟಯೋಗ ಮತ್ತು

ರಾಜಯೋಗಗಳನ್ನೂ ಕಲಿತರು..


IMPL Services ನ ಮಸ್ಕೀಟರಿ ಆಫೀಸರ್ ಮಿರ್ಜಾ

ನಾಯಕ್ ತಾರಾನಾಥರನ್ನು ಕುರಿತು


ಹೈದರಾಬಾದಿನ IMPL Services ನ ಮಸ್ಕೀಟರಿ ಆಫೀಸರ್ ಮಿರ್ಜಾ

ನಾಯಕ್ ಅವರು ತಾರಾನಾಥರಿಗೆ ಬರೆದ ಈ ಕೆಳಗಿನ ಪತ್ರ ಒಂದು ಐತಿಹಾಸಿಕ ವಿಷಯಕ್ಕೆ

ದಾಖಲೆಯನ್ನು ಒದಗಿಸುತ್ತದೆ. ಇಂಗ್ಲೆAಡಿನ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ

ತಾರಾನಾಥರು ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕಿತ್ತು, ಆದರೆ ಈ

ಅವಕಾಶದಿಂದ ಏಕೆ ವಂಚಿತರಾದರು? ಎಂಬ ವಿಷಯವನ್ನು ಅವರು ತಮ್ಮ ಪತ್ರದಲ್ಲಿ

ಉಲ್ಲೇಖಿಸಿದ್ದಾರೆ.


ಬೀದರನಲ್ಲಿ ತಾರಾನಾಥರು

ಬೀದರ್ ತಾರಾನಾಥರ ಜೀವನ ಚರಿತ್ರೆಯ ಅತಿ ಮಹತ್ವದ ಘಟ್ಟ ಎಂದೇ

ಹೇಳಬಹುದು, ಏಕೆಂದರೆ ತರುಣ ತಾರಾನಾಥರಲ್ಲಿ ಅಡಗಿದ್ದ ಅಪಾರ ಚೇತನ ಶಕ್ತಿ

ಹೊರಹೊಮ್ಮಲು ಆಸ್ಪದ ದೊರಕಿದ್ದು ಬೀದರ ಪಟ್ಟಣದಲ್ಲಿಯೇ. ಬ್ರಹ್ಮಚರ್ಯ, ತೇಜಸ್ಸು,

ಯೌವ್ವನ ಹಾಗೂ ಕ್ರಾಂತಿಕಾರಿ ಮನೋಭಾವನೆಗಳಿಂದ ಕೂಡಿದ ತರುಣ ತಾರಾನಾಥರಿಗೆ

ಅವರ ಧ್ಯೇಯಗಳನ್ನು ಸೂಕ್ತವಾದ ಮಾರ್ಗದಲ್ಲಿ ಮುಂದುವರಿಸಿಕೊAಡು ಹೋಗಲು

ಸಮರ್ಥ ಗುರು ದೊರಕಿದ್ದು ಬೀದರಿನಲ್ಲಿ. ಬೀದರ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ

ಜೆ.ಮಂಗಯ್ಯನವರು ಮಹಾಯೋಗಿಗಳಾಗಿದ್ದರು. ತಾರಾನಾಥರಲ್ಲಿ ಹುದುಗಿದ್ದ

ಅಧ್ಯಾತ್ಮ ಜೀವನವನ್ನು ಅರಳಿಸಿದವರು.



ತಾರಾನಾಥರ ಕಾಲರಾ ಚಿಕಿತ್ಸೆ ಹಾಗೂ ಮಾಣಿಕ್ ಪ್ರಭುಗಳ ಆಶಯ ಎರಡನೇ ಮಾಣಿಕ ಪ್ರಭುಗಳು ಶ್ರೀ ಮಾರ್ತಾಂಡ ಮಾಣಿಕ ಪ್ರಭು ಮಹಾರಾಜರು ಕ್ರಿ.ಶ.1861-1936.


ತಾರಾನಾಥರು ಬೀದರಿಗೆ ಬಂದAಥ

ಸಂದರ್ಭದಲ್ಲಿ ಬೀದರ ತುಂಬ ‘ಕಾಲರಾ’ ರೋಗವು

ಹರಡಿತ್ತು. ಯಾರಿಂದಲೂ ವೈದ್ಯಕೀಯ ಸಹಾಯ

ದೊರೆಯದೆ ಜನರು ತೊಂದರೆ ಅನುಭವಿಸುತ್ತಿದ್ದರು.

ಇದನ್ನೆಲ್ಲ ಕಂಡ ತಾರಾನಾಥರ ಮನ ಮಮ್ಮಲ

ಮರುಗಿತು. ಹೇಗಾದರೂ ಮಾಡಿ ಕಾಲರಾ ಪೀಡಿತರಿಗೆ

ಒಂದು ಪರಿಹಾರ ಕಂಡುಕೊಳ್ಳಬೇಕೆAದು, ಊರ

ಹೊರವಲಯದಲ್ಲಿದ್ದ ಕ್ರಿಶ್ಚಿಯನ್ ಪಾದ್ರಿಯವರ

ಸಹಕಾರದೊಂದಿಗೆ ತಮ್ಮ ಜೀವನದ ಹಂಗುತೊರೆದು

ಕಾಲರಾದಿಂದ ಬಳಲುತ್ತಿದ್ದ ರೋಗಿಗಳ ಸೇವೆ

ಮಾಡಿದರು. ಈ ಒಂದು ಸೇವೆಯಿಂದ ತಾರಾನಾಥರು

ಬೀದರಿನ ಜನರ ಮನಗೆದ್ದರು.

bottom of page