top of page

‘ಹಮ್‌ದರ್ದ್’ ಸ್ಥಾಪನೆ - 24-3-1920



ಹಮ್‌ದರ್ದ್ ಸ್ಕೂಲಿನ ಪ್ರಾರಂಭದ ದಿನಗಳಲ್ಲಿ ನಾಲ್ಕಾರು ಜನ ಅಭಿಮಾನಿಗಳು

ತಾರಾನಾಥರನ್ನು ಕಾಣಲು ಬಂದವರು, “ನೀವು ಪ್ರಾರಂಬಿಸಿದ ಸ್ಕೂಲಿಗೆ ಹಮ್‌ದರ್ದ್

ಎಂದು ಏಕೆ ಹೆಸರಿಟ್ಟಿದ್ದಿರಿ? ನಮ್ಮಲ್ಲಿ ನೂರಾರು ದೇವರ ನಾಮಾವಳಿಗಳಿವೆ

ಯಾವುದಾದರೊಂದು ದೇವರ ನಾಮದಿಂದ ಶಾಲೆಯನ್ನು ಕರೆಯಬಹುದಲ್ಲ'' ಎಂದು

ಆಕ್ಷೇಪಿಸಿದರು. ಅದಕ್ಕೆ ತಾರಾನಾಥರು, `ಹಮ್‌ದರ್ದ್’ ಶಬ್ದಕ್ಕಿರುವ ಗುಣ, ಭಾವ

ಶಕ್ತಿಗಳು ಅಪೂರ್ವವಾಗಿವೆ. ‘ಹಮ್‌ದರ್ದ್’ ಯಾ ‘ಹಮ್‌ದರ್ದಿ’ ಎಂದರೆ ಅನುಕಂಪ,

Compassion . ಸಹಾನುಭೂತಿ ಎಂಬ ಅರ್ಥವಾಗುತ್ತಿದ್ದರೂ, ಹಮ್‌ದರ್ದ್ ಶಬ್ಧಕ್ಕಿರುವ

ಫೋರ್ಸ ಬೇರೆ ಶಬ್ದಗಳಿಗೆ ಬರುವದಿಲ್ಲ. ಇಲ್ಲಿ ‘ಹಮ್+ದರ್ದ (ದೂಸರೊಂಕೆ ದುಖಃ

ಮೆ ಶರೀಖ ಹೋನಾ) ಬೇರೆಯವರ ದುಖಃ ನಿವಾರಣೆಗಾಗಿ ನೀನು ಭಾಗವಹಿಸಿ

ಕಾರ್ಯ ಮಾಡು’ ಎಂದು ಅರ್ಥವಾಗುವದು. ನಮ್ಮಲ್ಲಿ ಈ ಹಮ್‌ದರ್ದಿ, Sympathy , Compassion, ಮಾಯವಾಗುತ್ತಲಿದೆ, ಆದ್ದರಿಂದಲೇ ಈ ಶಾಲೆಗೆ ‘school of sympathy with positive action to Relieve the suffering’ ಎಂಬ ವಿಶೇಷಾರ್ಥವು ಈ ಶಬ್ದದಲ್ಲಿ ಅಡಗಿದೆ. ಈ ಹಮ್‌ದರ್ದಿ ಗುಣವು ನಮ್ಮಲ್ಲಿ ರಕ್ತಗತವಾಗಿ ಕಾರ್ಯ ರಂಗದಲ್ಲಿ ಉಕ್ಕಿ ಬರಲಿ ಎಂದೇ ಈ ಹಮ್‌ದರ್ದ್ ಹೆಸರಿಟ್ಟಿದ್ದೇನೆ” ಎಂದು ವಿವರಿಸಿದರು.



bottom of page