top of page

ಹೈದರಾಬಾದ್ ನಿಜಾಂ ವಿರುದ್ಧ ತಾರಾನಾಥರ INDIAN DYER ಲೇಖನ






ತಾರಾನಾಥರು ರಾಯಚೂರಿಲ್ಲಿದ್ದದ್ದು ನಿಜಾಮರ ಕಾಲ. ನಿಜಾಂ ಸರಕಾರವು

ತನಗೆ ಅನುಕೂಲವಾಗುವಂಥ ಕಾಯಿದೆಗಳನ್ನು ಮಾಡಿಕೊಂಡಿತ್ತು. ಆದರೆ ಆತನ

ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಬಹಳೇ ಕ್ರೂರರಾಗಿದ್ದರು. ಇಂಥಹದೇ

ಒಂದು ಕ್ರೂರ ಘಟನೆ ತಾರಾನಾಥರ ಕಣ್ಣೆದುರೇ ನಡೆಯಿತು. ಮಾನವೀಯತೆಯನ್ನು

ಮೈಗೂಡಿಸಿಕೊಂಡಿರುವ, ಸ್ತಿçÃಯನ್ನು ಜಗನ್ಮಾತೆಯ ರೂಪದಲ್ಲಿ ಕಾಣುವ ತಾರಾನಾಥರು

ಈ ಹಿಂಸಾತ್ಮಕ ಘಟನೆಯಿಂದ ಸಿಟ್ಟಿಗೇಳುತ್ತಾರೆ


ಇಂಡಿಯನ್ ಡೈಯರ್ ಲೇಖನ

ಗರ್ಭಿಣಿ ಮಹಿಳೆಯು ಸಂಕಟದಿAದ ಒದ್ದಾಡುತ್ತಿರುವುದನ್ನು ತಾರಾನಾಥರು

ನೋಡಿ ಕೆಂಡ ಮಂಡಲವಾಗಿ, ಸಿಟ್ಟು ತಾಳದೆ ಖಿhe ಊiಟಿಜu ಪತ್ರಿಕೆಯಲ್ಲಿ ನಿಜಾಮನ

ಹಾಗು ಅವನ ಅಧಿಕಾರಿಗಳ ದುರಾಡಳಿತವನ್ನು ಖಂಡಿಸಿ

“ಇಂಡಿಯನ್ ಡೈಯರ್” ಎಂದು ಲೇಖನ ಬರೆಯುತ್ತಾರೆ. ಜಲಿಯನ್ ವಾಲಾಬಾಗ್

ನರಮೇಧ ಕುಖ್ಯಾತಿಯ ಬ್ರಿಟಿಷ್ ಅಧಿಕಾರಿ ಜನರಲ್ ಡೈಯರ್‌ಗೆ ಹೋಲಿಸಿ

ಬರೆದ ಲೇಖನವಿದು. ಇದನ್ನು ಓದಿದ ನಿಜಾಂ ಸರಕಾರವು ಸಿಟ್ಟಿಗೆದ್ದು, ಈ ಲೇಖನ

ಬರೆದವರನ್ನು ‘ದಸ್ತಗಿರಿ’ ಮಾಡಬೇಕೆಂದು ಆರ್ಡರ್ ಹೊರಡಿಸುತ್ತಾರೆ. ಆದರೆ ಆ

ಲೇಖನ ತಾರಾನಾಥರ ಸಹೋದ್ಯೋಗಿಯಾಗಿದ್ದ ಹೈದರಾಬಾದಿನವರಾದ ರಾಜಾ

ಬಹಾದ್ದೂರ (ಆರ್. ಆನಂದ) ಅವರ ಹೆಸರಿನಲ್ಲಿ ಪ್ರಕಟವಾಗಿತ್ತು. ಇವರ ಹೆಸರನ್ನು

ಓದಿದ ನಿಜಾಂ ಸರಕಾರವು ಕೂಡಲೇ ರಾಜಾಬಹಾದ್ದೂರರನ್ನು ದಸ್ತಗಿರಿ ಮಾಡಿ

ಅಂಡಮಾನ ದ್ವೀಪದಲ್ಲಿನ ಮನ್ನಾನ್ನೂರು ಜೈಲಿಗೆ ಹಾಕಿತು. ರಾಜಾ ಬಹುದ್ದೂರರನ್ನು

ಬಂಧಿಸಿದಾಗ ತಾರಾನಾಥರು ರಾಯಚೂರಿನಲ್ಲಿ ಇರಲಿಲ್ಲ. ತಾರಾನಾಥರು ರಾಷ್ಟಿçÃಯ

ಪ್ರಚಾರಕ್ಕೆಂದು ಖಿಲಾಫತ್ ಚಳುವಳಿಯ ಮುಖಂಡರಾದ ಶೌಕತ್ ಅಲಿ ಮತ್ತು

ಮಹಮ್ಮದ್ ಅಲಿ ಅವರೊಂದಿಗೆ ಅರ್ಕಾಟ ಜಿಲ್ಲೆಗೆ ಹೋಗಿದ್ದರು. ತಮ್ಮ ಸಹದ್ಯೋಗಿ

ರಾಜಾ ಬಹದ್ದೂರರು ತಮ್ಮಿಂದಾಗಿ ಸೆರೆಮನೆ ವಾಸ ಅನುಭವಿಸುವಂತಾಯಿತಲ್ಲ

ಎಂದುಕೊAಡು ಕೂಡಲೇ ರಾಯಚೂರಿನ ಪ್ರಮುಖರಿಂದ ‘ರಾಜಾ ಬಹದ್ದೂರ

ಅವರನ್ನು ಬಿಡುಗಡೆ ಮಾಡುವಂತೆ’ ತಾರಾನಾಥರು ಖುz್ದÁಗಿ ಒಂದು ಮನವಿಪತ್ರವನ್ನು

ಬರೆದು ನಿಜಾಂ ಸರಕಾರಕ್ಕೆ ಸಲ್ಲಿಸಿದರು. ಮನವಿ ಪತ್ರ ಊರ ಪ್ರಮುಖರ

ಹೆಸರಿನಲ್ಲಿದ್ದರೂ, ಬರೆದವರು ತಾರಾನಾಥರೇ ಎಂಬುದು ನಿಜಾಂ ಸರಕಾರದ



ಅಧಿಕಾರಿಗಳಿಗೆ ತಿಳಿದುಹೋಯಿತು. ನಿಜಾಂ ಸರಕಾರ ಅದರ ಇನ್ನೊಂದು ಪ್ರತಿಯನ್ನು

ವೈಸರಾಯರಿಗೂ ಕಳುಹಿಸಿಕೊಟ್ಟರು. ಪತ್ರ ಬರೆದವರು ತಾರಾನಾಥರೆಂದು ತಿಳಿದು

ಹಾಗೂ ಖಿಊಇ IಓಆIಂಓ ಆಙಇಖ ಲೇಖನದ ಹಿಂದೆ ತಾರಾನಾಥರೇ ಇರುವದು

ಎಂಬುದು ಗೊತ್ತಾಗಿ ಅವರನ್ನು ಬಂಧಿಸಲು ಫರ್ಮಾನು ಹೊರಡಿಸಿದರು. ಆದರೆ

ಹೈದರಾಬಾದ ಸರಕಾರದ ಉನ್ನತ ಅಧಿಕಾರಿಗಳಲ್ಲಿ ಅನೇಕರು ತಾರಾನಾಥರನ್ನು

ಬಲ್ಲವರಾಗಿದ್ದರು. ತಾರಾನಾಥರ ಬಂಧನದ ಸುದ್ದಿಯನ್ನು ಮುಂಚಿತವಾಗಿಯೇ ಅರಿತ

ಹಮ್‌ದರ್ದ್ ಶಾಲೆಯ ಹಿತೈಷಿಗಳು ಅಂದರೆ - ಯೋಗೇಂದ್ರರಾವ್ ವಕೀಲರು,

ಸರಾಫ್ ವಾಸಪ್ಪನವರು ಹಾಗೂ ಹೆಸರಾಂತ ವಕೀಲರಾದ ಊರಿನ ಏಕ ಮೇವ

ಮುಖಂಡರಾದ ಪಿ. ಕೃಷ್ಣರಾಯರು (ಪಿ.ಕಿಶನ್ ರಾಯರು) ಡಿ. ಗೋವಿಂದರಾಯರು,

ಗಣದಿನ್ನಿ ತಿಮ್ಮಣ್ಣ, ಜೈನಾರಾಯಣ ಸೇಠ, ಮೆಡಿಸೆಟ್ಟಿ ಗೋವಿಂದಯ್ಯ ಆಗಿನ ಪ್ರಮುಖ

ವ್ಯಾಪಾರಿಗಳು. - ಇವರೆಲ್ಲರೂ ಸೇರಿ ಪಂ.ತಾರಾನಾಥರನ್ನು ಅವರ ಮನಸ್ಸಿನ

ವಿರುದ್ಧವಾಗಿ ರಾತ್ರೋರಾತ್ರಿ ರಾಯಚೂರಿನ ರೈಲ್ವೆ ಸ್ಟೇಷನ್ನಿಗೆ ಕರೆತಂದು, ಒಂದು

ಗೂಡ್ಸ್ ಗಾಡಿಯಲ್ಲಿ ಒತ್ತಾಯವಾಗಿ ಕೂಡಿಸಿ, ನಿಜಾಂ ಸಂಸ್ಥಾನದ ದಕ್ಷಿಣಗಡಿಯಲ್ಲಿರುವ

ಬ್ರಿಟಿಷರ ಆಡಳಿತಕ್ಕೆ ಸೇರಿದ ತುಂಗಭದ್ರಾಕ್ಕೆ ಕಳುಹಿಸಿಬಿಟ್ಟರು. ತುಂಗಭದ್ರ ಆಗ ಬ್ರಿಟಿಷರ

ಆಡಳಿತದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯಲ್ಲಿತ್ತು.


bottom of page