top of page

ಕರ್ನಾಟಕ ಧನ್ವಂತರಿ ತಾರಾನಾಥರು






ಪಂ.ತಾರಾನಾಥರು ಆಯುರ್ವೇದ ಭೀಷಗ್ಗಾಚಾರ್ಯರೆಂದೇ ಪ್ರಸಿದ್ಧರಾಗಿದ್ದರು.

ಅಖಿಲ ಕರ್ನಾಟಕ ಆಯುರ್ವೇದದ ಸಮ್ಮೇಳನಗಳಿಗೂ ಅವರು ತಪ್ಪದೇ ಬರುತ್ತಿದ್ದರು.

ಅವರ ಪಾಂಡಿತ್ಯ ಮತ್ತು ಅಯುರ್ವೇದೋನ್ನತಿಗಾಗಿ ಅವರು ಕೈಗೊಂಡ ವೃತ

ಮತ್ತು ಶ್ರಮಗಳು, ಅವರನ್ನು ಆಯುರ್ವೇದ ಸಮ್ಮೇಳನಗಳ ಅಧ್ಯಕ್ಷ ಪೀಠವನ್ನು

ಅಲಂಕರಿಸುವAತೆ ಮಾಡಿದವು.

೧. ೧೯೩೪ ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಕರ್ನಾಟಕ ಆಯುರ್ವೇದ

ಸಮ್ಮೇಳನದ ಅಧ್ಯಕ್ಷರಾಗಿದ್ದರು.

೨. ೧೯೩೮ ರಲ್ಲಿ ಪುಣೆಯಲ್ಲಿ ನಡೆದ ಬೊಂಬಾಯಿ ಪ್ರಾಂತೀಯ ಸಮ್ಮೇಳನದ

ಅಧ್ಯಕ್ಷರಾಗಿದ್ದರು.

೩. ೧೯೩೮ ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಅನುವಂಶಿಕ ವೈದ್ಯರ

ಸಮ್ಮೇಳನದ ಅಧ್ಯಕ್ಷರಾಗಿದ್ದರು

ಈ ಹಂತದಲ್ಲಿ ನಾವು ಗಮನಿಸಲೇಬೇಕಾದ ಒಂದು ಪ್ರಮುಖ ಅಂಶವೆAದರೆ,

ತಾರಾನಾಥರ ವಿಶಿಷ್ಟ ಚಿಕಿತ್ಸಾ ಕ್ರಮ. ಸೋಜಿಗದ ಸಂಗತಿ ಎಂದರೆ ತಾರಾನಾಥರು ಮಂತ್ರ,

ತಂತ್ರ, ಯೋಗ ವಿದ್ಯೆಯನ್ನು ತಮ್ಮ ಚಿಕಿತ್ಸಾ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದರು.

ಇದರಿಂದಾಗಿ ಅವರ ಚಿಕಿತ್ಸಾ ಪದ್ದತಿಯು ಪ್ರಸಿದ್ದಿ ಪಡೆದು ವಿದೇಶಿಯರನ್ನು

ಆಕರ್ಷಿಸಿತು. ಇವರ ಚಿಕಿತ್ಸಾ ಪದ್ದತಿಯ ಕೆಲವು ಉದಾಹರಣೆಗಳು ---------

bottom of page