top of page

ಮದ್ರಾಸ್ ಪ್ರಾಂತ್ಯಕ್ಕೆ ತಾರಾನಾಥರು , ಪ್ರೇಮಾಯತನ -1921, ಹಾಗೂ ಪ್ರೇಮ ವಿದ್ಯಾ ಪೀಠ ಸ್ಥಾಪನೆ





ರಾಯಚೂರು ಬಿಟ್ಟು ಬಂದ ತಾರಾನಾಥರು ತುಂಗಭದ್ರ ರೈಲ್ವೆ ಸ್ಟೇಷನ್ ಬಳಿ

ಇರುವ ರಾಂಪುರ ಹಳ್ಳಿಗೆ ಬಂದರು. ಅವರಿಗೆ ಆ ಹಳ್ಳಿಯ ಪರಿಚಯವೇ ಇರಲಿಲ್ಲ.

ಹಳ್ಳಿಯ ಹೊರವಲಯದಲ್ಲಿ ಹಾಳು ಬಿದ್ದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ

ಇರತೊಡಗಿದರು. ``ಹಳ್ಳಿಗೆ ಬಂದ ಮೊದ ಮೊದಲು ಜಪ ತಪಗಳಲ್ಲಿಯೇ

ಮಗ್ನರಾಗಿರುತ್ತಿದ್ದರು. ೨೧ ದಿವಸದವರೆಗೆ ಯೋಗಾನುಷ್ಠಾನ ಕೈಗೊಂಡಿದ್ದರು’’ ಎಂದು

ಖ್ಯಾತ ಇಂಗ್ಲೀಷ್ ಕಾದಂಬರಿಕಾರ ರಾಜಾರಾವ್ ಅವರು ಜನವರಿ ೧೯೩೫ ರ ಂSIA

ಮ್ಯಾಗಝೀನಿನಲ್ಲಿಯ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರೆ.


* ಪ್ರೇಮಾಯತನ ಗುಡಿಸಲುಗಳು

ಮೊದಲಿಗೆ ಈ ಆಶ್ರಮ ಕೇವಲ ಆಧ್ಯಾತ್ಮ

ಸಾಧಕರಿಗೆ ಮತ್ತು ಬ್ರಹ್ಮಚಾರಿಗಳಿಗೆ ಯೋಗ

ಸಾಧನೆಗೆಂದೇ ನಿರ್ಮಿಸಲಾಗಿತ್ತು. ನಂತರ

ಅದರ ರೂಪುರೇಷೆಗಳು ಬದಲಾಗಿ, ಆಧ್ಯಾತ್ಮ,

ಆಯುರ್ವೇದ, ಸಮಾಜ ಸೇವೆ, ಸಂಗೀತ, ರಂಗ ಕಲೆ ಮುಂತಾದ ವಿದ್ಯೆಗಳ

ಕೇಂದ್ರವಾಯಿತು. ಜ್ಞಾನದಾಹದಿಂದ ಬಂದ ಶಿಷ್ಯಂದಿರಿಗೆ, ಜ್ಞಾನ ದಾಸೋಹವಾದರು.

ತಮ್ಮಲ್ಲಿ ಬರುವ ರೋಗಿಗಳಿಗೆ ತಾರಾನಾಥರು, ಉಚಿತ ಊಟ ವಸತಿ ಸೌಕರ್ಯ

ಕಲ್ಪಿಸಿದರು. ಗುಡಿಸಲುಗಳು ಜ್ಞಾನ ದೇಗುಲಗಳಾದವು.

bottom of page